ಶಿಕ್ಷಕನಾಗುವುದು
ಜೀವನದ ಗುರಿ. ಆದರೆ ಮಕ್ಕಳ ಎದುರಿಗೆ ನಿಂತು ಮಾತನಾಡುವುದಕ್ಕೆ ಏನೋ ಒಂದು ಥರದ ಭಯ,
ಆತಂಕ ಎಂಬುದು ಒಬ್ಬರ ಸಮಸ್ಯೆ. ಯಾವುದೇ ಶಾಲೆಗೆ ಸಂದರ್ಶನಕ್ಕೆ ಹೋದರೂ ಇಂಗ್ಲಿಷ್
ಸಂವಹನದಲ್ಲಿ ನಪಾಸಾಗುವ ಬೇಸರ ಮತ್ತೊಬ್ಬರದು. ವಿಷಯವೆಲ್ಲಾ ತಿಳಿದಿರುತ್ತದೆ ಆದರೆ
ಅದನ್ನು ಮಕ್ಕಳಿಗೆ ಮನಮುಟ್ಟುವ ಹಾಗೆ ಹೇಳಿಕೊಡಲಾಗುತ್ತಿಲ್ಲವಲ್ಲ ಎಂಬುದು ಮಗದೊಬ್ಬರ
ತೊಳಲಾಟ.ದೇಹಭಾಷೆ,
ಬೋಧನಾ ಶೈಲಿ, ಪ್ರಾಜೆಕ್ಟ್‌ಗಳನ್ನು ಮಾಡುವುದು, ಗುಂಪು ಚರ್ಚೆ, ಕೈಬರಹ, ವ್ಯಾಕರಣ,
ವಿದ್ಯಾರ್ಥಿಗಳನ್ನು ಆಕರ್ಷಿಸುವ ವ್ಯಕ್ತಿತ್ವ, ತಮಾಷೆ, ಮಾತಿನ ಶೈಲಿ, ತಾಂತ್ರಿಕ
ನೈಪುಣ್ಯತೆ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಮೊಬೈಲ್ ಅಪ್ಲಿಕೇಶನ್‌ಗಳ ಬಳಕೆ,
ಕಾರ್ಯಕ್ರಮಗಳನ್ನು ಸಂಘಟಿಸುವ ರೀತಿ, ವಿದ್ಯಾರ್ಥಿಗಳಿಗೆ ಹುರುಪು ತುಂಬುದು, ಅವರನ್ನು
ಪ್ರೇರೇಪಿಸುವುದು, ಶಿಕ್ಷಣ ಹಕ್ಕು ಸೇರಿದಂತೆ ಶಿಕ್ಷಣ ಕ್ಷೇತ್ರದ ಬಗ್ಗೆ ಸಾಮಾನ್ಯ
ತಿಳಿವಳಿಕೆ ನೀಡುವುದರ ಜೊತೆಗೆ ಒಟ್ಟಾರೆ ಈ ಕ್ಷೇತ್ರಕ್ಕೆ ಅತ್ಯಗತ್ಯವಾದ ಗುಣಮಟ್ಟದ
ಶಿಕ್ಷಕರನ್ನು ಪೂರೈಸುವ ಕೆಲಸ ಮಾಡಲಾಗುತ್ತಿದೆ.
ಹೀಗೆ ಹಲವಾರು ಸಣ್ಣಪುಟ್ಟ ಸಮಸ್ಯೆ ಎದುರಿಸುತ್ತಿರುವ ಈ ಭಾವಿ ಶಿಕ್ಷಕರು ಡಿ.ಇಡಿ,
ಬಿ,ಇಡಿ ಮತ್ತು ಎಂ.ಇಡಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾದ ಪ್ರತಿಭಾವಂತರು.
ತಮ್ಮಲ್ಲಿರುವ ಪ್ರತಿಭೆಯನ್ನು ದುಡಿಸಿಕೊಳ್ಳಲು ಕಷ್ಟಪಡುವ ಹಳ್ಳಿಗಾಡಿನ ಇಂತಹ
ಪದವೀಧರರಿಗಾಗಿಯೇ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ‘ಆಕಾಂಕ್ಷ’ ಎಂಬ ಯೋಜನೆ
ಆರಂಭಿಸಿದೆ.
ಜುಲೈನಿಂದ ಆರಂಭವಾಗಿರುವ ಈ ಯೋಜನೆಯ ಮೂಲಕ ವಿದ್ಯಾರ್ಥಿಗಳ ದೃಷ್ಟಿಯಿಂದ ಶಿಕ್ಷಕರಿಗೆ ಅವಶ್ಯವಾದ ಸಂವಹನ,
ಪ್ರತಿ ವರ್ಷ ಸಾಕಷ್ಟು ಪದವೀಧರರು ಬಿ.ಇಡಿ ಮತ್ತು ಎಂ.ಇಡಿನಂತಹ ಕೋರ್ಸ್‌ಗಳನ್ನು ಪೂರೈಸಿ ಹೊರಬರುತ್ತಿದ್ದಾರೆ. ಈ ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದಿಲ್ಲ. ಇನ್ನು ಖಾಸಗಿ ಶಾಲೆ ಮತ್ತು ಕಾಲೇಜುಗಳಲ್ಲಿ ನಿಪುಣ ಶಿಕ್ಷಕರು ಮಾತ್ರ ನೌಕರಿ ಗಿಟ್ಟಿಸುತ್ತಾರೆ, ಹಳ್ಳಿಗಾಡಿನಿಂದ ಬಂದು ವೃತ್ತಿಪರ ಕೋರ್ಸ್‌ಗಳನ್ನು ಪೂರೈಸಿದ ಯುವಕರು ಸಂವಹನ ಮತ್ತು ತಾಂತ್ರಿಕತೆ ಕೊರತೆ ಎದುರಿಸುವುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ನಿಗದಿಪಡಿಸಿದ ಸಂಬಳಕ್ಕೆ ದುಡಿಯುವ ಅನಿವಾರ್ಯ ಇರುತ್ತದೆ.
ಸಣ್ಣಪುಟ್ಟ ಲೋಪದೋಷಗಳಿಂದ ಈ ಯುವಕರು ಅರ್ಹ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂಬುದನ್ನು ಅರಿತು ಈ ಯೋಜನೆ ರೂಪಿಸಲಾಗಿದೆ. ಬಿ.ಇಡಿ ಕೋರ್ಸ್ ಮಾಡಿದ ನಂತರ ಶಿಕ್ಷಕನಾಗುವ ಸಂದರ್ಭದಲ್ಲಿ ತಾವು ಎದುರಿಸಿದ ಸಮಸ್ಯೆಗಳನ್ನೇ ಸಾಕಷ್ಟು ಮಂದಿ ಎದುರಿಸುತ್ತಿದ್ದಾರೆ ಎಂಬುದನ್ನು ಮನಗಂಡ ಸದ್ಯ ಆಕಾಂಕ್ಷ ಯೋಜನೆಯ ಮ್ಯಾನೇಜರ್ ಸಹ ಆಗಿರುವ ರವಿ ಚವಾಣ್ ಇದರ ರೂವಾರಿ.
ನಾಲ್ಕು ತಿಂಗಳ ಈ ಕೋರ್ಸ್‌ನಲ್ಲಿ ಐದು ಮಂದಿ ಕಾಯಂ ಶಿಕ್ಷಕರಿದ್ದಾರೆ. ಅಲ್ಲದೇ ವಿವಿಧ ಕ್ಷೇತ್ರಗಳ ವಿಷಯ ತಜ್ಞರಿಂದ ತರಬೇತಿ ಕೊಡಿಸಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವ ವಿವಿಧ ಸರ್ಕಾರೇತರ ಸಂಸ್ಥೆಗಳ ಮೂಲಕ ವಿವಿಧ ಶಾಲೆಗಳಿಗೆ ಭಾವಿ ಶಿಕ್ಷಕರನ್ನು ಕರೆದೊಯ್ದು ಪಾಠ ಮಾಡಿಸಲಾಗುತ್ತದೆ. ಸುಸಜ್ಜಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದ್ದು ಗುಣಮಟ್ಟದ ತರಬೇತಿ ನೀಡಲಾಗುತ್ತಿದೆ. ಅಲ್ಲದೇ ಕಾಲಕಾಲಕ್ಕೆ ಅಭ್ಯರ್ಥಿಗಳಲ್ಲಿನ ಕೌಶಲಗಳ ಮೌಲ್ಯ ಮಾಪನವನ್ನೂ ಮಾಡಲಾಗುತ್ತದೆ.
‘ಜುಲೈನಲ್ಲಿ ಆಕಾಂಕ್ಷ ಯೋಜನೆ ಆರಂಭವಾಗಿದ್ದು, ಸದ್ಯ 15 ಮಂದಿಯನ್ನೊಳಗೊಂಡ ಎರಡನೇ ಬ್ಯಾಚ್‌ಗೆ ತರಬೇತಿ ನೀಡಲಾಗುತ್ತಿದೆ. ಹುಬ್ಬಳ್ಳಿ– ಧಾರವಾಡ, ದಾವಣಗೆರೆ, ಶಿವಮೊಗ್ಗ, ಗದಗ, ಹಾವೇರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ, ಕೊಪ್ಪಳ ಜಿಲ್ಲೆಗಳಿಂದ ಬಂದಿರುವ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.
ಎಷ್ಟೇ ಮಂದಿ ಅರ್ಜಿ ಹಾಕಿದರೂ ಅವರ ಅರ್ಹತೆ ಮತ್ತು ಶಿಕ್ಷಕನಾಗಲು ಅವರಲ್ಲಿರುವ ಯೋಗ್ಯತೆಯನ್ನು ತೂಕ ಮಾಡಿಯೇ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಒಂದು ತಿಂಗಳಲ್ಲಿ ಅಭ್ಯರ್ಥಿಯಲ್ಲಿ ಸುಧಾರಣೆ ಕಂಡು ಬರದಿದ್ದಲ್ಲಿ ಅಂತಹವರನ್ನು ನಿರ್ದಾಕ್ಷಿಣ್ಯವಾಗಿ ಕೈಬಿಡಲಾಗುತ್ತದೆ. ಇದನ್ನು ಮೊದಲೇ ಅಭ್ಯರ್ಥಿಯ ಗಮನಕ್ಕೆ ತಂದಿರಲಾಗಿರುತ್ತದೆ’ ಎನ್ನುತ್ತಾರೆ ರವಿ.
ಪ್ರತಿನಿತ್ಯ ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳಿರುತ್ತವೆ. ಬೆಳಿಗ್ಗೆ 7 ಗಂಟೆಗೆ ಆರಂಭವಾಗುವ ತರಬೇತಿ ರಾತ್ರಿ 10ರ ವರೆಗೂ ವಿವಿಧ ಹಂತಗಳಲ್ಲಿ ನಡೆಯಲಿದೆ. ವಿಜ್ಞಾನ ಪದವೀಧರರೂ ತರಬೇತುಗೊಳ್ಳಬಹುದಾದ ಇದೊಂದು ಸರ್ಟಿಫಿಕೇಟ್ ಕೋರ್ಸ್ ಆಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯೋಗವಾಗಲಿದೆ. ಈ ಕೋರ್ಸ್ ಮಾಡಲು ಒಬ್ಬರು ₨16,000 ಪಾವತಿಸಬೇಕಿದೆ. ವಸತಿ ಸೌಲಭ್ಯ ಹಾಗೂ ಶೇ. 100ರಷ್ಟು ಉದ್ಯೋಗಾವಕಾಶವನ್ನು ಸಂಸ್ಥೆ ಕಲ್ಪಿಸಲಿದೆ.
ಅರ್ಹ ಅಭ್ಯರ್ಥಿಗಳು ಮುಂಗಡವಾಗಿ ₨3000 ಪಾವತಿಸಬೇಕಿದ್ದು, ಉಳಿದಿದ್ದಕ್ಕೆ ಸಂಸ್ಥೆಯೇ ಸಾಲದ ವ್ಯವಸ್ಥೆ ಮಾಡಲಿದೆ. ಕೆಲಸ ಸಿಕ್ಕ ನಂತರ ಈ ಸಾಲವನ್ನು ಕಂತುಗಳಲ್ಲಿ ಮರುಪಾವತಿ ಮಾಡುವ ವ್ಯವಸ್ಥೆಯಿದೆ. ‘ಸಾಕಷ್ಟು ಮಂದಿ ಡಿ.ಇಡಿ, ಬಿ.ಇಡಿ ಮಾಡಿ ಕೊನೆಗೆ ಕೆಲಸ ಸಿಗದೇ ಹತಾಶರಾಗುತ್ತಾರೆ. ಅದಕ್ಕೆ ಬದಲಾಗಿ ತಮ್ಮಲ್ಲಿರುವ ಕೌಶಲ ವೃದ್ಧಿಸಿಕೊಳ್ಳುವ ಕಡೆಗೆ ಗಮನಹರಿಸಬೇಕು, ನಾವು ಇಲ್ಲಿ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತೇವೆ ಅಷ್ಟೆ.
ಪ್ರತಿಯೊಂದನ್ನು ಅಭ್ಯರ್ಥಿಗಳಿಂದಲೇ ಮಾಡಿಸುತ್ತೇವೆ. ಇಲ್ಲಿ ಅವರು ವಿದ್ಯಾರ್ಥಿಗಳಲ್ಲ, ನಾವು ಶಿಕ್ಷಕರಲ್ಲ. ಮುಕ್ತ ವಾತಾವರಣವಿದ್ದು, ಯಾವುದೇ ಸಂದರ್ಭದಲ್ಲಿ ಅವರಲ್ಲಿರುವ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು. ಅಷ್ಟು ಮಾತ್ರವಲ್ಲದೇ ತರಬೇತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಸಲಹೆ ಸೂಚನೆಗಳನ್ನೂ ನೀಡಬಹುದು’ ಎನ್ನುತ್ತಾರೆ ಆಕಾಂಕ್ಷ ಯೋಜನೆಯ ಸಹಾಯಕರಾದ ಶಿವನಾಂದ ಹರಳಯ್ಯ.
ಇನ್ನು ಇಲ್ಲಿ ಕೋರ್ಸ್ ಪೂರೈಸಿ ಶಿಕ್ಷಕರಾಗಿ ಕೆಲಸ ಮಾಡುವವರಿಗೆ ಶಾಲೆಯ ವಾತಾವರಣ ಇಷ್ಟವಾಗದಿದ್ದಲ್ಲಿ ಬದಲಿ ವ್ಯವಸ್ಥೆಯನ್ನು ಸಂಸ್ಥೆಯೇ ಮಾಡಲಿದೆ. ಅಲ್ಲದೇ ಅಭ್ಯರ್ಥಿಗೆ ಹೆಚ್ಚಿನ ತರಬೇತಿ ಅವಶ್ಯವಿದ್ದಲ್ಲಿ ಸಂಸ್ಥೆಯೇ ಅದರ ಜವಾಬ್ದಾರಿ ಹೊತ್ತುಕೊಳ್ಳಲಿದೆ. ಉತ್ತಮ ಶಿಕ್ಷಕರ ಮೂಲಕ ದೇಶದ ನಾಳಿನ ಪ್ರಜೆಗಳ ಭವಿಷ್ಯವನ್ನು ಉಜ್ವಲವಾಗಿಸುವುದರ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆ ತರುವುದು ಸಂಸ್ಥೆಯ ಉದ್ದೇಶ. ಹೊಸ ಬ್ಯಾಚ್‌ಗಳು ಆರಂಭವಾಗಲಿವೆ.
ಸಂಪರ್ಕಕ್ಕೆ: 7353950111/8105124047.